ಹುಡುಕಿ:

Wednesday, January 28, 2009

*****

ಖಾಲಿಯಾಯಿತು ಬಾಟಲಿ..
ನಾ ಏನ ಕುಡಿಯಲಿ?
ನೀ ಇಲ್ಲದ ಬದುಕಲಿ..
ನಾ ಹೇಗೆ ಬಾಳಲಿ?

Saturday, January 10, 2009

ನೀನಿಲ್ಲ...

ನನ್ನ ಕವನದಲ್ಲಿನ್ನು ನೀ ಇರುವುದಿಲ್ಲ..
ನನ್ನ ನಿಟ್ಟುಸಿರಲ್ಲಿನ್ನು ನಿನ್ನ ನೆನಪಿರುವುದಿಲ್ಲ..
ನನ್ನ ಕಣ್ಣಲ್ಲಿನ್ನು ನಿನ್ನ ಬಿಂಬವಿರುವುದಿಲ್ಲ
ನನ್ನ ಕನಸಲ್ಲಿನ್ನು ನೀ ಕಾಡುವುದಿಲ್ಲ..
ನನ್ನ ಕಿವಿಯಲ್ಲಿನ್ನು ನಿನ್ನ ದನಿವಿರುವುದಿಲ್ಲ..
ನನ್ನ ಬದುಕಲ್ಲಿನ್ನು ಬಣ್ಣವಿರುವುದಿಲ್ಲ..
ನನ್ನ ಬಾಳಲ್ಲಿನ್ನು ಬೆಳಕಿರುವುದಿಲ್ಲ..

ಕಾರಣ..
ನನ್ನ ಗುಂಡಿಗೆಯಲ್ಲಿ ಪ್ರಾಣವಿರಲ್ಲ...
ಹೇಳಿ ಹೋಗು ಕಾರಣ..

ನೀ ಜೊತೆಯಲ್ಲಿದ್ದರೆ ಸುಖಃದ ಹರಟೆ..
ಜೀವ ಹಸುರು..ಬದುಕು ಶ್ರಾವಣ..
ಜೊತೆಯಿಂದ ಬೇರೆಯಾಗಿ ಹೊರಟೆ...
ಹೋಗುವ ಮುನ್ನ.. ಹೇಳಿ ಹೋಗೆ ಕಾರಣ..

ಕಂಪ್ಲೇಂಟ್ ...

ಬರೀ ಪ್ರೀತಿ - ಕುಡಿತದ ಬಗ್ಗೆನೇ ಬರೀತೀಯ..
ಅನ್ನೋದು ಗೆಳಯರ ಕಂಪ್ಲೇಂಟ್ ...
ಆದರೆ ನಶೆ ಕೊಡುವ
ವಸ್ತುಗಳಷ್ಟೇ ನನಗೆ ಇಂಪಾರ್ಟೆ೦ಟ್...

ಅವಳು ...

ಅವಳೂ ಕೂಡ ಸಮಾಜ ಸುಧಾರಕಿ...
ಅವಳು ಕೈಕೊಟ್ಟ ಹುಡುಗರು ಆಗುವುದಿಲ್ಲ ಪೊರ್ಕಿ...
ಅವಳ ನೆನಪಲ್ಲೇ ಬರೆಯುತ್ತಾರೆ ಕಥೆ - ಕವನ..
ಇಲ್ಲ ಕೊಡುತ್ತಾರೆ ಕುಡಿಯುವ ಕಡೆ ಗಮನ...
ಕವನ ಬರೆಯುವವರು ಆಗುತ್ತಾರೆ ಕಾಳಿದಾಸ..
ಕುಡಿದು ತೂರಾಡುವವರು ಆಗುತ್ತಾರೆ ದೇವದಾಸ...

Monday, January 5, 2009

title ಬೇರೆ ಕೇಡು...

ಮಾತಾಡಲು ಮೂರು ನಿಮಿಷ ಕೂಡ ಕೊಡದೆ..
ಸಪ್ತಪದಿ ತುಳಿದು ಬಿಟ್ಟಳು..
ಗಾಜಿನದು ಎಂದರೂ ಕೇಳದೆ..
ನನ್ನ ಕನಸ ಹೊಡೆದಾಕಿ ಬಿಟ್ಟಳು..

ಮಲಗಲು ನಿದ್ರೆ ಬರುವುದಿಲ್ಲ...
ಕನಸಿನ ಕಾರ್ಖಾನೆ ಖಾಲಿಯಾಗಿರುವುದಲ್ಲ....

ಅವಳ ಪ್ರೀತಿಸಿ ಹೃದಯ ಸುಟ್ಟುಕೊಂಡಾಗಿದೆಯಲ್ಲ...
ಇನ್ನು ಕುಡಿದು ಕರುಳ ಸುಟ್ಟುಕೋಬೇಕಲ್ಲ..


Thursday, January 1, 2009

ಅತಿ ಸಣ್ಣ ಕಥೆ

ನನ್ನ ಮದ್ವೆ ಆಗ್ತಿಯ ಅಂತ ಅವಳ್ಳನ್ನ ಕೇಳ್ದೆ.. ದುಡ್ಡಿದ್ರೆ ಆಗ್ತೀನಿ ಅಂದ್ಲು...
ನಾ ಹಣದ ಹಿಂದೆ ಹೋದೆ... ಅವ್ಳು ಹಣವಂತನ ಹಿಂದೆ ಹೋದ್ಲು