ಹುಡುಕಿ:

Tuesday, July 28, 2009

ನೋವು- ನಗು

ಎದೆಯಲ್ಲಿ ಸಾವಿರ ನೋವಿದ್ದರೂ ..ಮುಖದಲ್ಲಿ ನಗುವು ಮಾಸಿಲ್ಲಾ..
ಯಾಕೆಂದರೆ..ದುಃಖವು ಪ್ರದರ್ಶನಕ್ಕೆ ಇಡುವ ಸರಕಲ್ಲಾ..

Tuesday, July 21, 2009

ಒಂದು ಮಿಂಚೆಯ ಸುತ್ತಾ .....

ಇದು ನನ್ನ ಮತ್ತು ಚೈತ್ರ ನಡುವೆ ನಡೆದ ಒಂದು ಮಿಂಚೆ ಸರಪಣಿ..ನಿಮಗೂ ಸಹ ಇಷ್ಟವಾಗಬಹುದು ಎಂಬ ನಂಬಿಕೆ ನನ್ನದು...ಕೆಳಗಿನಿಂದ ಓದಿ....


to be continued...
------------------------------------------------------------------------------------------
From: H S, Chaitra

Sent: Monday, July 20, 2009 2:24 PM

To: Veerabhadra Setty, Chandan

Subject: RE:

Wah wah, ee point of view channagide

Sariyo tappo gottilla, adre quite fun agide,
_____________________________________________

From: Veerabhadra Setty, Chandan

Sent: Monday, 20 July 2009 2:21 PM

To: H S, Chaitra

Subject: RE:

ಮನಸ್ಸನ್ನಂತೂ ಕೊಡಲಿಲ್ಲಾ..atleast ಕಿರುಬೆರಳಿನ ಉಗುರಾದರೂ ಕೊಡಲಿ ಎಂಬ ಬಯಕೆ..

ಮನದ ಗಳತಿಯಾದರು ಸರಿ..ಇಲ್ಲಾ ಪಾರಾಗಾನ್ ಚಪ್ಪಲಿ ಮಾಡಲ್ ಆದರೂ ಓಕೆ…
Thanks and Regards,

Chandan V

_____________________________________________

From: H S, Chaitra

Sent: Monday, July 20, 2009 2:15 PM

To: Veerabhadra Setty, Chandan

Subject: RE:


Edagalina kiri beralanna tagondu enu maduttiri ?

Nimmi hudugiyenu Paragon slippers modeling madabeke ?

Athava nagunagutta manada gelatiyaadare sake?
_____________________________________________

From: Veerabhadra Setty, Chandan

Sent: Monday, 20 July 2009 2:14 PM

To: H S, Chaitra

Subject: RE:


ನೂರು ನಕ್ಷತ್ರಗಳು ಸೇರಿದರೂ.. ಚಂದ್ರನಾಗುವುದಿಲ್ಲಾ…

ಹೆಂಗೆಳೆಯರು ಸಾವಿರಾರಾದರೂ…ನನ್ನ ಹುಡುಗಿಯ ಎಡಗಾಲಿನ ಕಿರುಬೆರಳಿನ ಉಗುರಿಗೂ ಸಮರಾಗುವುದಿಲ್ಲಾ…


Thanks and Regards,

Chandan V

_____________________________________________

From: H S, Chaitra

Sent: Monday, July 20, 2009 2:08 PM

To: Veerabhadra Setty, Chandan

Subject: RE:


Novannu hanchikollodakkeee iruduvu geleyaru

Avalildre beda; Iddare innu bekaadastu hengeleyaru :)
_____________________________________________

From: Veerabhadra Setty, Chandan

Sent: Monday, 20 July 2009 2:07 PM

To: H S, Chaitra

Subject: RE:
ಮೂರು ಶಾಟು ಟಕಿಲಾ..ಅವಳನ್ನು ಮರೆಸುವುದಿಲ್ಲಾ…

ಈ ನೋವನ್ನು ಕಡಿಮೆ ಮಾಡಕೊಳ್ಳೋಣವೆಂದರೂ..ಬೇರೆಯವರೊಂದಿಗೆ ಹಂಚಿಕೊಳ್ಳಲಾಗುವುದಿಲ್ಲಾ…


Thanks and Regards,

Chandan V

____________________________________________

From: H S, Chaitra

Sent: Monday, July 20, 2009 2:01 PM

To: Veerabhadra Setty, Chandan

Subject: RE:


Mooru shotu Taqeela ;)
_____________________________________________

From: Veerabhadra Setty, Chandan

Sent: Monday, 20 July 2009 11:47 AM

To: H S, Chaitra

Subject:

ದೇವದಾಸನಿಗಾದರೋ ಮರೆಯಲು...ಒಬ್ಬಳೇ ಪಾರು..

ಆದರೆ ನನಗೆ...ಸಾವಿರಾರು...

ಪಾರುವ ಮರೆಯಲು ದೇವದಾಸ ಹಿಡಿದ ಬಾಟಲಿ...

ಅವಳ ಮರೆಯಲು..ನಾ ಏನ ಕುಡಿಯಲಿ????


Thanks and Regards,

Chandan V

Tuesday, July 14, 2009

ಗುಟ್ಟು...

ಗುಟ್ಟು ಹೇಳಲು ಹೋಗಿ..

ಕೈ ಅವಳ ಗಲ್ಲಕ್ಕೆ ತಾಗಿ ...

ಮನಸ್ಸು ಲೂಸು ಮಾದ

Tuesday, July 7, 2009

ಮಾತು ಕಥೆ..

ತುಟಿ ಮೇಲೆ ಬಂದಂತ ಮಾತೊಂದೆ ಒಂದು..

ಎದೆಯಲ್ಲಿ ಉಳಿದದ್ದು ಮುನ್ನೂರ ಒಂದು..

ಆಗುವುದೆಲ್ಲಾ ಒಳ್ಳೆಯದಕ್ಕೆ ಆಯಿತು...

ಮೊಬೈಲ್ ಬಿಲ್ಲು ಕಡಿಮೆಯಾಯಿತು...

Thursday, April 30, 2009

ಅವಳ ನೆನಪು..

ಅವಳ ನೆನಪೇ ಹಾಗೆ..

ಕೆಲವರು ಕುಡಿದು ಹಾಳಾಗುತ್ತಾರೆ

ಕೆಲವರು ಬರೆದು ಹಾಳಾಗುತ್ತಾರೆ...

ಇನ್ನು ಕೆಲವರು ಕುಡಿದು ಬರೆಯುತ್ತಾರೆ..

Wednesday, April 29, 2009

ಅವಳು....

ಸೀರೆಯುಟ್ಟು ಸುಮ್ನೆ ನಿಂತರೂ..

ಅದು ಪೋಸೆ...

ಹಳದಿ ಚೂಡಿಯಲ್ಲಿ ಹೂವಿನ ತೋಟ ಹೊಕ್ಕರೆ..

ಚಿಟ್ಟೆಗಳಿಗೂ ಕನ್ಫ಼ೂಸೆ..

Monday, March 30, 2009

ಕುಡಿ..ಮರಿ..

ಸರಾಯಿ ಕಂಡು ಹಿಡಿದವನಿಗೆ..

ಕೈ ಎತ್ತಿ ಮುಗಿಯಬೇಕು...

ಅದನ್ನು ಕುಡಿದ ಮೇಲೇ

ಅವಳನ್ನು ಮರಿಯಬೇಕು..

ಅವಳನ್ನು ಮರೆಯಲು...

ಮತ್ತೆ ಮತ್ತೆ ಕುಡಿಯಬೇಕು...

ಶಾಯರಿ....

ತುಮ್ಕೋ ದೆಖಾ ತೊ
ತಡಪ್ ಉಠೆ ಯೇ ದಿಲ್..

ತುಮ್ ಹೋ ತೊ ಹರ್ ಮುಲಾಕಾತ್
ಹೋಂಗೆ ಮೆಹಫಿಲ್….

Wednesday, March 18, 2009

ಮನಸ್ಸು ಜಾರಿತು ...

ಅವಳು ಜಾರಿದ್ದ ಸೆರಗನ್ನು ಸರಿಪಡಿಸುವ ಪರಿ ಕಂಡು..
ಸರಿಯಾಗಿದ್ದ ನನ್ನ ಮನಸ್ಸು ಜಾರಿಹೋಯಿತು…

Thursday, March 12, 2009

ಗೆಳತಿ ನೀ ಸಿಗದಿರಲು…

ಗೆಳತಿ ನೀ ಸಿಗದಿರಲು…

ಕೈಯಲ್ಲಿ ಸಾರಾಯಿ ಬಟ್ಟಲು..
ತುಟಿಯಲ್ಲಿ ದುಃಖದ ಗಝಲು..
ಎದೆಯಲ್ಲಿ ಮುರಿದ ಪ್ರೇಮದ ಮಹಲು..

ಇಷ್ಟರಿಂದಲೇ ಕಳೆವುದು ನನ್ನ ರಾತ್ರಿ ಹಗಲು..
ಗೆಳತಿ ನೀ ಸಿಗದಿರಲು…

Wednesday, March 11, 2009

ಸುಂದ್ರಿ...

ಆ ನೀಲಿ ಚೂಡಿಯಲ್ಲಿ ನೀ…...
ಎಷ್ಟು ಚೆಂದ ಇದ್ದೆ..
ಪದಗಳು ಸಿಕ್ಕಿದ್ದರೆ ಸಾವಿರಾರು ಕವಿತೆಗಳನ್ನ
ಬರೆದು ಬಿಸಾಕುತ್ತಿದ್ದೆ….

Monday, March 9, 2009

ಅವಳೆಂದರೇ..


ಗಾಲಿಬ್ ನ ಗಜಲು...

ಹೂವಿನ ಗಮಲು..

ಖುಷಿಯ ಬಯಲು..

ಕಡು ನೀಲಿ ಮುಗಿಲು..

ಅದೃಷ್ಟ ಬಿತ್ತುವ ನೇಗಿಲು..

ಸ್ವರ್ಗದ ಬಾಗಿಲು..

ಸಾರಯಿಯ ಅಮಲು..

ಪ್ರೇಮದ ಮಹಲು..

ಸಾವಿರ ಮಜಲು..

ಸುಂದರ ದಿಗಿಲು...

ಮಿಂಚಿಗಿಂತ ಮಿಗಿಲು..

Wednesday, February 18, 2009

ಸ್ಫೂರ್ತಿ

ಜಗತ್ತನೇ ಗೆಲ್ಲುವೆನು ಇಂದೇ..
ನೀನಿರಲು ನನ್ನ ಹಿಂದೆ..

Wednesday, February 11, 2009

ಪ್ರೀತಿ ಎಂದರೆ......

ಪ್ರೀತಿ ಎಂದರೆ ಏಕಾಂತದ ಮೌನ ಅಲ್ಲ,,
ಪ್ರೀತಿ ಎಂದರೆ ಸಾಗರ ತಳದ ಕತ್ತಲೆ ಅಲ್ಲ..
ಪ್ರೀತಿ ಎಂದರೆ ಸುಡುವ ಬೆಂಕಿ ಅಲ್ಲ…
ಪ್ರೀತಿ ಎಂದರೆ ಗುನುಗುವ ಹಾಡು ಅಲ್ಲ..
ಪ್ರೀತಿ ಎಂದರೆ ಜಾತ್ರೆ ಮಿಠಾಯಿ ಅಲ್ಲ..
ಪ್ರೀತಿ ಎಂದರೆ ಕಿಕ್ಕು ಕೊಡುವ ಸರಾಯಿ ಅಲ್ಲ..

ಪ್ರೀತಿ ಎಂದರೆ... ನಮ್ಮ್ ಬಸ್ ಸ್ಟಾಪ್ ಅಲ್ಲಿ ಹತ್ತೊ ಹುಡುಗಿ..

Sunday, February 8, 2009

ಅಮಲು...

ಏರುವುದಿಲ್ಲ ಅಮಲು..

ಕುಡಿದರು ಬಾಟಲುಗಳ ಮೇಲೆ ಬಾಟಲು..

ಒಮ್ಮೆ ಅವಳು ಕಣ್ಣೊಡೆದಳು ನಕ್ಕು..

ಇನ್ನು ಇಳಿದಿಲ್ಲ ಅದರ ಕಿಕ್ಕು...

Wednesday, January 28, 2009

*****

ಖಾಲಿಯಾಯಿತು ಬಾಟಲಿ..
ನಾ ಏನ ಕುಡಿಯಲಿ?
ನೀ ಇಲ್ಲದ ಬದುಕಲಿ..
ನಾ ಹೇಗೆ ಬಾಳಲಿ?

Saturday, January 10, 2009

ನೀನಿಲ್ಲ...

ನನ್ನ ಕವನದಲ್ಲಿನ್ನು ನೀ ಇರುವುದಿಲ್ಲ..
ನನ್ನ ನಿಟ್ಟುಸಿರಲ್ಲಿನ್ನು ನಿನ್ನ ನೆನಪಿರುವುದಿಲ್ಲ..
ನನ್ನ ಕಣ್ಣಲ್ಲಿನ್ನು ನಿನ್ನ ಬಿಂಬವಿರುವುದಿಲ್ಲ
ನನ್ನ ಕನಸಲ್ಲಿನ್ನು ನೀ ಕಾಡುವುದಿಲ್ಲ..
ನನ್ನ ಕಿವಿಯಲ್ಲಿನ್ನು ನಿನ್ನ ದನಿವಿರುವುದಿಲ್ಲ..
ನನ್ನ ಬದುಕಲ್ಲಿನ್ನು ಬಣ್ಣವಿರುವುದಿಲ್ಲ..
ನನ್ನ ಬಾಳಲ್ಲಿನ್ನು ಬೆಳಕಿರುವುದಿಲ್ಲ..

ಕಾರಣ..
ನನ್ನ ಗುಂಡಿಗೆಯಲ್ಲಿ ಪ್ರಾಣವಿರಲ್ಲ...




ಹೇಳಿ ಹೋಗು ಕಾರಣ..

ನೀ ಜೊತೆಯಲ್ಲಿದ್ದರೆ ಸುಖಃದ ಹರಟೆ..
ಜೀವ ಹಸುರು..ಬದುಕು ಶ್ರಾವಣ..
ಜೊತೆಯಿಂದ ಬೇರೆಯಾಗಿ ಹೊರಟೆ...
ಹೋಗುವ ಮುನ್ನ.. ಹೇಳಿ ಹೋಗೆ ಕಾರಣ..

ಕಂಪ್ಲೇಂಟ್ ...

ಬರೀ ಪ್ರೀತಿ - ಕುಡಿತದ ಬಗ್ಗೆನೇ ಬರೀತೀಯ..
ಅನ್ನೋದು ಗೆಳಯರ ಕಂಪ್ಲೇಂಟ್ ...
ಆದರೆ ನಶೆ ಕೊಡುವ
ವಸ್ತುಗಳಷ್ಟೇ ನನಗೆ ಇಂಪಾರ್ಟೆ೦ಟ್...

ಅವಳು ...

ಅವಳೂ ಕೂಡ ಸಮಾಜ ಸುಧಾರಕಿ...
ಅವಳು ಕೈಕೊಟ್ಟ ಹುಡುಗರು ಆಗುವುದಿಲ್ಲ ಪೊರ್ಕಿ...
ಅವಳ ನೆನಪಲ್ಲೇ ಬರೆಯುತ್ತಾರೆ ಕಥೆ - ಕವನ..
ಇಲ್ಲ ಕೊಡುತ್ತಾರೆ ಕುಡಿಯುವ ಕಡೆ ಗಮನ...
ಕವನ ಬರೆಯುವವರು ಆಗುತ್ತಾರೆ ಕಾಳಿದಾಸ..
ಕುಡಿದು ತೂರಾಡುವವರು ಆಗುತ್ತಾರೆ ದೇವದಾಸ...

Monday, January 5, 2009

title ಬೇರೆ ಕೇಡು...

ಮಾತಾಡಲು ಮೂರು ನಿಮಿಷ ಕೂಡ ಕೊಡದೆ..
ಸಪ್ತಪದಿ ತುಳಿದು ಬಿಟ್ಟಳು..
ಗಾಜಿನದು ಎಂದರೂ ಕೇಳದೆ..
ನನ್ನ ಕನಸ ಹೊಡೆದಾಕಿ ಬಿಟ್ಟಳು..

ಮಲಗಲು ನಿದ್ರೆ ಬರುವುದಿಲ್ಲ...
ಕನಸಿನ ಕಾರ್ಖಾನೆ ಖಾಲಿಯಾಗಿರುವುದಲ್ಲ....

ಅವಳ ಪ್ರೀತಿಸಿ ಹೃದಯ ಸುಟ್ಟುಕೊಂಡಾಗಿದೆಯಲ್ಲ...
ಇನ್ನು ಕುಡಿದು ಕರುಳ ಸುಟ್ಟುಕೋಬೇಕಲ್ಲ..


Thursday, January 1, 2009

ಅತಿ ಸಣ್ಣ ಕಥೆ

ನನ್ನ ಮದ್ವೆ ಆಗ್ತಿಯ ಅಂತ ಅವಳ್ಳನ್ನ ಕೇಳ್ದೆ.. ದುಡ್ಡಿದ್ರೆ ಆಗ್ತೀನಿ ಅಂದ್ಲು...
ನಾ ಹಣದ ಹಿಂದೆ ಹೋದೆ... ಅವ್ಳು ಹಣವಂತನ ಹಿಂದೆ ಹೋದ್ಲು