ಹುಡುಕಿ:

Tuesday, December 30, 2008

ನಾನು

ಯುದ್ಧಕ್ಕೆ ನಿಂತರೆ
ಪಾಟಲಿಪುತ್ರ..
ಕುಡಿಯೋಕೆ ಕುಂತರೆ
ಬಾಟಲಿಪುತ್ರ...

ಮುಸಾಫಿರ್

ಕವಿತೆ ಬರೆಯಲು ಸ್ಪೂರ್ತಿ ಕೊಡುವ
ದೇವಿಗೆ ನನ್ನ ನಮನ
ಬಸ್ಸು ಹತ್ತಿದ ಮೇಲೆ
ನಮ್ಮ ಕಡೆಗೂ ಕೊಡಿ ಸ್ವಲ್ಪ ಗಮನ

ಪ್ರೀತಿಯ ನಕ್ಷತ್ರಿಕ

ಚಂದಿರನು ಬರುವನು
ಒಮ್ಮೊಮ್ಮೆ ನನ್ನ ಬೀದಿಗೆ
ಒಮ್ಮೆ ತೋರಿಸು ನಿನ್ನ ಮೊಗವನ್ನು
ಸರಿಸಿ ಮುಂಗುರುಳ ಬದಿಗೆ

Monday, December 29, 2008

ರೈಟ್ ಆದ್ರೆ..

ಪ್ರೀತಿ ಹನಿಗೆ ಬಾಯಿ ತೆರೆದೆ..

ವಿಷವ ನೀ ಸುರಿದೋದಯ?

ಪ್ರೀತಿ ಹುಟ್ಟುವ..

ಮೊದಲು..
ಎಲ್ಲರು ಒಂದು ದಿನ ಸಾಯಲೇಬೇಕು ..
ಆದರೆ ನನಗೆ ಆತುರವಿಲ್ಲ..
ವಿಸ್ಕಿ ಜೊತೆ ಸೋಡಬೇಕು..
ಸುಕ್ಕ ನಾ ಕುಡಿಯುವುದಿಲ್ಲ
ನಂತರ..
ಎಲ್ಲರು ಒಂದು ದಿನ ಸಾಯಲೇಬೇಕು ..
ಅವಳಿಲ್ಲದೆ ಏನು ಉಪಯೋಗ..
ಯಾರಿಗಾಗಿ ಬದುಕಬೇಕು..
ವಿಷವಿದ್ದರೆ ಕೊಡಿ ಬೇಗ..


Thursday, December 18, 2008

ಜನುಮದ ಗೆಳತಿ

ನಾನೊಬ್ಬ ದಾರಿಹೋಕ.. ಕನಸೊಂದು ಜೇಬಿನಲ್ಲಿ..

ಮಳೆ ತುಂಬಿಕೊಂಡ ಮೋಡ.. ಬರಬೇಕು ಬಾನಿನಲ್ಲಿ...

ನನಗಾಗಿ ಒಂದು ಜೀವ ...ಸಿಗಬೇಕು ದಾರಿಯಲ್ಲಿ...

Wednesday, December 17, 2008

ಪ್ರಶ್ನೆಗಳು???

ಬಿರಿದ ಹೂವು....

ಅವಳ ನಗುವ ಹೋಲುವುದೇಕೆ?

ತಂಗಾಳಿ ....

ಅವಳ ಕಂಪ ತರುವುದೇಕೆ?

ಪ್ರೀತಿ ಎಂದ ಕೂಡಲೇ ..

ಅವಳ ಮೋಸ ನೆನೆಪಾಗುವುದೇಕೆ?

Tuesday, December 16, 2008

ನನ್ನವಳ ನೆನಪು

ಎದೆಯಲಿ ನಾಟಿದ ಚೂರಿಯ ಹಾಗೆ...

ತೆಗೆದರೆ ಸಾವು..

ಹಾಗೆ ಬಿಟ್ಟರೆ ನೋವು