ಹುಡುಕಿ:

Monday, March 30, 2009

ಕುಡಿ..ಮರಿ..

ಸರಾಯಿ ಕಂಡು ಹಿಡಿದವನಿಗೆ..

ಕೈ ಎತ್ತಿ ಮುಗಿಯಬೇಕು...

ಅದನ್ನು ಕುಡಿದ ಮೇಲೇ

ಅವಳನ್ನು ಮರಿಯಬೇಕು..

ಅವಳನ್ನು ಮರೆಯಲು...

ಮತ್ತೆ ಮತ್ತೆ ಕುಡಿಯಬೇಕು...

ಶಾಯರಿ....

ತುಮ್ಕೋ ದೆಖಾ ತೊ
ತಡಪ್ ಉಠೆ ಯೇ ದಿಲ್..

ತುಮ್ ಹೋ ತೊ ಹರ್ ಮುಲಾಕಾತ್
ಹೋಂಗೆ ಮೆಹಫಿಲ್….

Wednesday, March 18, 2009

ಮನಸ್ಸು ಜಾರಿತು ...

ಅವಳು ಜಾರಿದ್ದ ಸೆರಗನ್ನು ಸರಿಪಡಿಸುವ ಪರಿ ಕಂಡು..
ಸರಿಯಾಗಿದ್ದ ನನ್ನ ಮನಸ್ಸು ಜಾರಿಹೋಯಿತು…

Thursday, March 12, 2009

ಗೆಳತಿ ನೀ ಸಿಗದಿರಲು…

ಗೆಳತಿ ನೀ ಸಿಗದಿರಲು…

ಕೈಯಲ್ಲಿ ಸಾರಾಯಿ ಬಟ್ಟಲು..
ತುಟಿಯಲ್ಲಿ ದುಃಖದ ಗಝಲು..
ಎದೆಯಲ್ಲಿ ಮುರಿದ ಪ್ರೇಮದ ಮಹಲು..

ಇಷ್ಟರಿಂದಲೇ ಕಳೆವುದು ನನ್ನ ರಾತ್ರಿ ಹಗಲು..
ಗೆಳತಿ ನೀ ಸಿಗದಿರಲು…

Wednesday, March 11, 2009

ಸುಂದ್ರಿ...

ಆ ನೀಲಿ ಚೂಡಿಯಲ್ಲಿ ನೀ…...
ಎಷ್ಟು ಚೆಂದ ಇದ್ದೆ..
ಪದಗಳು ಸಿಕ್ಕಿದ್ದರೆ ಸಾವಿರಾರು ಕವಿತೆಗಳನ್ನ
ಬರೆದು ಬಿಸಾಕುತ್ತಿದ್ದೆ….

Monday, March 9, 2009

ಅವಳೆಂದರೇ..


ಗಾಲಿಬ್ ನ ಗಜಲು...

ಹೂವಿನ ಗಮಲು..

ಖುಷಿಯ ಬಯಲು..

ಕಡು ನೀಲಿ ಮುಗಿಲು..

ಅದೃಷ್ಟ ಬಿತ್ತುವ ನೇಗಿಲು..

ಸ್ವರ್ಗದ ಬಾಗಿಲು..

ಸಾರಯಿಯ ಅಮಲು..

ಪ್ರೇಮದ ಮಹಲು..

ಸಾವಿರ ಮಜಲು..

ಸುಂದರ ದಿಗಿಲು...

ಮಿಂಚಿಗಿಂತ ಮಿಗಿಲು..