ಹುಡುಕಿ:

Tuesday, December 30, 2008

ಪ್ರೀತಿಯ ನಕ್ಷತ್ರಿಕ

ಚಂದಿರನು ಬರುವನು
ಒಮ್ಮೊಮ್ಮೆ ನನ್ನ ಬೀದಿಗೆ
ಒಮ್ಮೆ ತೋರಿಸು ನಿನ್ನ ಮೊಗವನ್ನು
ಸರಿಸಿ ಮುಂಗುರುಳ ಬದಿಗೆ

Monday, December 29, 2008

ರೈಟ್ ಆದ್ರೆ..

ಪ್ರೀತಿ ಹನಿಗೆ ಬಾಯಿ ತೆರೆದೆ..

ವಿಷವ ನೀ ಸುರಿದೋದಯ?

ಪ್ರೀತಿ ಹುಟ್ಟುವ..

ಮೊದಲು..
ಎಲ್ಲರು ಒಂದು ದಿನ ಸಾಯಲೇಬೇಕು ..
ಆದರೆ ನನಗೆ ಆತುರವಿಲ್ಲ..
ವಿಸ್ಕಿ ಜೊತೆ ಸೋಡಬೇಕು..
ಸುಕ್ಕ ನಾ ಕುಡಿಯುವುದಿಲ್ಲ
ನಂತರ..
ಎಲ್ಲರು ಒಂದು ದಿನ ಸಾಯಲೇಬೇಕು ..
ಅವಳಿಲ್ಲದೆ ಏನು ಉಪಯೋಗ..
ಯಾರಿಗಾಗಿ ಬದುಕಬೇಕು..
ವಿಷವಿದ್ದರೆ ಕೊಡಿ ಬೇಗ..


Thursday, December 18, 2008

ಜನುಮದ ಗೆಳತಿ

ನಾನೊಬ್ಬ ದಾರಿಹೋಕ.. ಕನಸೊಂದು ಜೇಬಿನಲ್ಲಿ..

ಮಳೆ ತುಂಬಿಕೊಂಡ ಮೋಡ.. ಬರಬೇಕು ಬಾನಿನಲ್ಲಿ...

ನನಗಾಗಿ ಒಂದು ಜೀವ ...ಸಿಗಬೇಕು ದಾರಿಯಲ್ಲಿ...

Wednesday, December 17, 2008

ಪ್ರಶ್ನೆಗಳು???

ಬಿರಿದ ಹೂವು....

ಅವಳ ನಗುವ ಹೋಲುವುದೇಕೆ?

ತಂಗಾಳಿ ....

ಅವಳ ಕಂಪ ತರುವುದೇಕೆ?

ಪ್ರೀತಿ ಎಂದ ಕೂಡಲೇ ..

ಅವಳ ಮೋಸ ನೆನೆಪಾಗುವುದೇಕೆ?

Tuesday, December 16, 2008

ನನ್ನವಳ ನೆನಪು

ಎದೆಯಲಿ ನಾಟಿದ ಚೂರಿಯ ಹಾಗೆ...

ತೆಗೆದರೆ ಸಾವು..

ಹಾಗೆ ಬಿಟ್ಟರೆ ನೋವು

Sunday, November 16, 2008

ನಾಳೆ - ನೆನ್ನೆ

ನಾಳೆ ಬಗ್ಗೆ ಕನಸು ಕಾಣಲು...

ಅವಳಿಲ್ಲ

ನೆನ್ನೆ ಬಗ್ಗೆ ಮರೆಯಲು..

ಅವಳಿಲ್ಲ...